भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಒಸರಿಕೆ

ಜಗುಳಿ ಹೋಗು; ವಾಕರಿಸು.
ಓಸರಿಸು

ಓಸು

ಎಲ್ಲಾ
ಬೆಕ್ಕು ಓಸೂ ಹಾಲ ಕುಡ್ದು ಹಾಯಾಗಿ ಮಲಿಕೊಂಡಿತ್ತು (ಬೀದ.ಜಿ)

ಓಹಿ

ಅವಧಿ; ಗಡುವು (ಮಂಡ್ಯ.ಜಿ)

ಓಳಹುರಿ

ಒಳಜ್ವರ (ಗುಲ್ಬ.ಜಿ)

ಓಳಾಗು

ಕೃಶವಾಗು; ಬಡವಾಗು

ಓಳಾಗು

ಸರಿದು ನಿಲ್ಲು (ಬಳ್ಳಾ.ಜಿ)

ಓಳಿ

ಬೀಜ ಬಿತ್ತಲು ತಯಾರಿಸಿಕೊಂಡ ಮಣ್ಣಿನ ಸಾಲು
ఆ ಗದ್ದೆಯಲ್ಲಿ ನಾಲ್ಕು ಓಳಿ ಇತ್ತು (ಉಕ)

ಓಳಿ

ಸಮೂಹ (ಬಿಜಾ.ಜಿ/ಚಿಮ.ಜಿ).
ಓಳ

ಓಳಿಗೆ

ಕುದುರೆ ಜೀನಿನ ಕೆಳಗೆ ಹಾಕುವ ಮೆತ್ತೆ; ತಡಿ (ಮಂಡ್ಯ.ಜಿ)

ಓಳಿದೆನೆ

ತೆನೆಯ ರಾಶಿ

ಓಳುಸೇರಕ್ಕಿ

ಅರ್ಧ ಬೊಗಸೆ ಅಕ್ಕಿ (ಶಿವ.ಜಿ)

ಓಳ್ಕೆ

ಸಂಭೋಗ (ಮೈಸೂ.ಜಿ).
ಕೂಟೆ; ಕೂಟ

ಓಳ್ಮಗ್ಲು

ಒಳಮಗ್ಗಲು; ಒಂದೇ ಕಡೆ; ಒಂದೇ ಮಗ್ಗಲಿನಲ್ಲಿ ಮಲಗುವುದು

ಓಳ್ಳಿ

ಓಕುಳಿ. ಕೃಷಿ ಸಂಬಂಧೀ ಪೂಜೆಯ ನಂತರ ಹೊಲದ ಸುತ್ತಲೂ ಚಲ್ಲುವ ಅರಶಿಣ ಕುಂಕುಮ ಕಲಸಿದ ನೀರು (ಶಿವ.ಜಿ)

ಔಂಕು

ಅಮುಕು; ಒತ್ತಿ ಹಿಡಿ.
ಔಕು, ಔಚುವೆ

ಔಂಗು

ಅಂಗು ಎಂಬ ಸಿಹಿ ಪದಾರ್ಥ ಮಾಡುವಾಗ ಬಳಕೆಯಾಗುವ ವಿಶಿಷ್ಟ ರೀತಿಯ ಗಡಿಗೆ. ಕೆಳಭಾಗದಲ್ಲಿ ಸುತ್ತಲೂ ನಾಲ್ಕು ಕಡೆ ಬಾಣ, ಸಂಕಲನ ಚಿಹ್ನೆ, ತ್ರಿಭುಜ, ವೃತ್ತಾಕಾರದ ರಂಧ್ರಗಳಿರುತ್ತವೆ. ಈ ಗಡಿಗೆಯನ್ನು ಒಲೆಯ ಮೇಲೆ ಬೋರಲು ಹಾಕಿ ಅದರ ಮೇಲೆ ಅಕ್ಕಿಯಹಿಟ್ಟನ್ನು ಸವರಿ ಬೇಯಿಸುತ್ತಾರೆ. ‍ನೋಡಿ- ಅಂಗು

ಔಂತ್ಲ

ನೋಡಿ- ಔತಣ.
ಅಂಟಿಕೆಪಂಟಿಕೆ ಔಂತ್ಲಕ್ಕೆ ಊಟಕ್ಕೆ ಕರೆದಿದ್ದಾರೆ

ಔಂಸ್ತಿ

ಔಷಧಿ

ಔಂಸ್ತಿ

ವಿಷ.
ಔಸುದ್ದಿ; ಔಸುದ್ಯಾ

ಔಖಳಿಮಳಿ

ಮಳೆಗಾಲಕ್ಕಿಂತ ಮುಂಚೆ ಬರುವ ಬೇಸಿಗೆ ಮಳೆ (ಬಿಜಾ.ಜಿ)
Follow Us :   
  Download Bharatavani App
  Bharatavani Windows App