भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

‍ಓಲೆಚಿಂತಾಣಿ

ಚಿನ್ನದ ಓಲೆ

‍ಓಲೆತತ್ರ

ತಾಳೆಗರಿಯ ಕೊಡೆ; ಇದನ್ನು ಆಟಿಕಳೆಂಜನ್ನು ಕೈಯಲ್ಲಿ ಹಿಡಿದಿರುತ್ತಾನೆ

ಓಲೆದೂತ

ಬಯಲಾಟಗಳಲ್ಲಿ, ಓಲೆಗಳನ್ನು ತಲುಪಿಸುವ ದೂತನ ಪಾತ್ರ (ದಕ.ಜಿ)

ಓಲೆಬೆಲ್ಲ

ತಾಳೆಮರದ ರಸದಿಂದ ಮಾಡಿದ ಬೆಲ್ಲ; ತಾಳೆಬೆಲ್ಲ. ತಾಳೆ ಮರದ ರಸವನ್ನು ‍ಹುಳಿ ಬರುವುದಕ್ಕೆ ಮೊದಲೇ ಕುದಿಸಿ ಬಂದ ಪಾಕವನ್ನು ಒದ್ದೆ ಬಟ್ಟೆಯ ಮೇಲೆ ಇಟ್ಟ ಓಲೆಯ ಸುರುಳಿಗೆ ಸುರಿಯುತ್ತಾರೆ ಇದರಲ್ಲಿ ಔಷಧಿ ಗುಣಗಳಿವೆ. ಬಾಣಂತಿಗೆ ಶುಂಠಿಯ ಜೊತೆ ಕೊಡುತ್ತಾರೆ

ಓಲೆಭಾಗ್ಯ

ಓಲೆಯನ್ನು ತೊಡುವ ಭಾಗ್ಯ; ಮುತ್ತೈದೆತನ.
ಓಲೆಭಾಗ್ಯ ಕೊಡು ತಾಯಿ.
ವಾಲೆಭಾಗ್ಯ

ಓಲೆಮನoಗ್

ಒಂದು ಜಾತಿಯ ಮೀನು. ಬೆನ್ನ ಹಸಿರಾಗಿದ್ದು ಎರಡೂ ಪಾರ್ಶ್ವ ಹಾಗೂ ಕೆಳಗಡೆ ಬೆಳ್ಳಿಯ ಬಣ್ಣವಿರುತ್ತದೆ. ಉಬ್ಬಿದ ಭಾಗದಲ್ಲಿ ಕಪ್ಪು ಬಣ್ಣವಿರುತ್ತದೆ (ದಕ.ಜಿ)

ಓಲೆಮಾನಿ

ಅಂಚೆಯ ಆಳು; ಓಲೆಕಾರ
ಇಬ್ಬರು ಓಲೆಮಾನಿಗಳು ಬೂಡಿನ ಮನೆಗೆ ಬಂದರು

ಓಲೆಸರಪಣಿ

ಯಕ್ಷಗಾನದಲ್ಲಿ ಸ್ತ್ರೀವೇಷವು ಧರಿಸುವ ಓಲೆ.
ತಾಂಗುಸರಪಣಿ

ಓಲ್ಗಸ್ವಾಮಿ

ಕಣದಲ್ಲಿ ರಾಶಿ ತೂರುವ ಸಂದರ್ಭದಲ್ಲಿ ಗಾಳಿ ಬರದಿದ್ದಾಗ ಗಾಳಿ ಜೋರಾಗಿ ಬೀಸಲಿ ಎಂದು ಹಾಕುವ ಘೋಷಣೆ (ಚಿಮ.ಜಿ)
ಓಲಿಗ್ಯಾ

ಓವರಿ

ಒಳಮನೆ; ಕೋಣೆ (ಮಂಡ್ಯ.ಜಿ)

ಓವರಿಗೆ

ಉಪ್ಪರಿಗೆ (ಮೈಸೂ.ಜಿ)

ಓವುಸು

ಪ್ರೀತಿ ತೋರಿಸು; ಆದರಿಸು

ಓವೆ

ಓರಣ; ಅಚ್ಚಕಟ್ಟು (ಶಿವ.ಜಿ)

ಒಷ್ಟುಮ

ವೈಷ್ಣವ ಪಂಥಕ್ಕೆ ಸೇರಿದವ (ಮೈಸೂ.ಜಿ)

ಓಸ

ವಂಶ; ಕುಲ; ಸಂತತಿ

ಓಸ ನಿರೋಸಾಗಲಿ

ವಂಶ ನಿರ್ವ೦ಶವಾಗಲಿ ಎ೦ಬ ಅರ್ಥಕೊಡುವ ಬೈಗುಳ (ಬಳ್ಳಾ.ಜಿ)

ಒಸಗರಿಲಿ

ವಂಶಕ್ಕೆ ತೊಂದರೆಯಾಗಲಿ ಎಂಬ ನಿಂದನೆಯ ನುಡಿ (ಬಳ್ಳಾ.ಜಿ)

ಓಸರ

ಸಮತೂಕವಿಲ್ಲದಿರುವುದು

ಓಸರ

ಸುಳ್ಳು

ಒಸರಿಕೆ

ಒಂದು ಬದಿಗೆ ಬಗ್ಗುವಿಕೆ
Follow Us :   
  Download Bharatavani App
  Bharatavani Windows App