भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

‍ಓಲಿ

ದನಗಳ ಬಾಲಕ್ಕೆ ತಗಲುವ ಒಂದು ಬಗೆಯ ರೋಗ

‍ಓಲಿ

ಮದುವೆಯಾಗುವ ಹೆಣ್ಣಿಗೆ ಕೊಡುವ ಕನ್ಯಾದಕ್ಷಿಣೆ; ತೆರ (ಧಾರ.ಜಿ)

‍ಓಲಿ

ಓಲೆ

‍ಓಲೆ ಕಟ್ಟೋಡು

ಕೋಲಾರ ಜಿಲ್ಲೆಯಲ್ಲಿ, ಮದುವೆಗೆ ಸಂಬಂಧಿಸಿದ ಒಂದು ಸಂಪ್ರದಾಯ. ಹೆಣ್ಣಿನ ಮೇಲೆ ಗಂಡಿನವರು ಹನ್ನೆರಡು ರೂಪಾಯಿ ಕಟ್ಟುತ್ತಾರೆ, ಹೆಣ್ಣಿನವರು ಇನ್ನೂ ಹೆಚ್ಚು ಕೇಳಿ ಜಗಳ ತೆಗೆಯುತ್ತಾರೆ (ಕೋಲಾ.ಜಿ)

‍ಓಲಿ ಕೊಡುವುದು

ಬುಡ್ಗ ಜಂಗಮರಲ್ಲಿ ವಿವಾಹ ಸಂದರ್ಭದ ಒಂದು ಸಂಪ್ರದಾಯ. ವರನ ತಂದೆ ತಾಯಿಗಳು ವಧುವಿನ ಬಿಡಾರಕ್ಕೆ ಹೋಗಿ ಎಲೆ ಅಡಿಕೆ ಅದರಲ್ಲಿ ಒಂಬತ್ತು ರೂಪಾಯಿ ವಧುವಿನ ತಾಯಿಗೆ ಕು೦ಕುಮ ಹಚ್ಚಿಕೊಡುತ್ತಾರೆ. ಇದು ಒಂಭತ್ತು ತಿಂಗಳು ಹೊತ್ತು ಹೆತ್ತು ಸಂಭಾಳಿಸಿದ್ದಕ್ಕಾಗಿ ಒಂಬತ್ತು ಸಾವಿರ ಎಂದು ವಧುವಿನ ತಾಯಿ ಹೇಳುತ್ತಾಳೆ

ಒಲಿಕೊಡೆ

ಮಡಿಕೊಡೆ; ದೇವರಿಗೆ, ಮಠಾಧಿಪತಿಗಳಿಗೆ ಗೌರವಪೂರ್ವಕವಾಗಿ ಬಳಸುವ ತಾಳೆಪತ್ರೆಯಿಂದ ಮಾಡಿರುವ ಅಲಂಕೃತ ಛತ್ರಿ (ಚಿಮ.ಜಿ)

ಒಲಿಕೊಡೆ

ಮದುವೆಯ ಕಾಶೀಯಾತ್ರೆ ಆಚರಣೆಯಲ್ಲಿ ಮದುಮಗನಿಗೆ ಕೊಡುವ ಹನೆ ಮರದ ಗರಿಯಿಂದ ಮಾಡಿದ ಕೊಡೆ (ದಕ.ಜಿ)

ಓಲಿಗ್ಯ

ದವಸಧಾನ್ಯ ಹೆಚ್ಚಲಿ ಎಂದು ಕಣ ಮಾಡುವಾಗ ಹೇಳುವ ಪದ; ಹುಲುಸಾಗಲಿ ಸಮೃದ್ಧಿಯಾಗಲಿ ಎಂಬ ಅರ್ಥದಲ್ಲಿ ಬಳಸುವ ಶಬ್ದ

ಓಲುಗಟ್ಟಿಸು

ನೇಣುಹಾಕಿಸು; ನೇಣು ಹಾಕಿ ತೂಗು ಬೀಳುವಂತೆ ಮಾಡು
ನಿನ್ನ ಓಲುಗಟ್ಟಿಸಿಯೇ ಕಟ್ಟಸೀನಿ (ಹಾಸ.ಜಿ)

‍ಓಲೆ

ವಾಲೆ

‍ಓಲೆ

‍ತಾಳೆ ಮರದ ಗರಿ

‍ಓಲೆ

ಕಾಗದ

‍ಓಲೆ

ಕಿವಿಯ ಆಭರಣ

ಓಲೆಕಾರ

ಅಂಚೆ ಕಾಗದಗಳನ್ನು ವಿತರಣೆ ಮಾಡುತ್ತಿದ್ದ ವ್ಯಕ್ತಿ (ಧಾರ.ಜಿ).
ವಾಲೇಕಾರ

ಓಲೆಕುಚ್ಚು

ಯಕ್ಷಗಾನದ ಸ್ತ್ರೀವೇಷಕ್ಕೆ ಹಾಕಲಾಗುವ ಕಿವಿಯಾಕಾರದಲ್ಲಿ ಇರುವ ಆಭರಣ (ದಕ.ಜಿ)

ಓಲೆಕುರುವೆ

ಒಲೆ ಪಕ್ಕದ ರಂಧ್ರ (ಶಿವ.ಜಿ)

ಓಲೆಕೊಪ್ಪು

ಕಿವಿಯ ಮೇಲ್ಭಾಗದಲ್ಲಿ ಧರಿಸುವ ಆಭರಣ; ಪುರುಷರ ಕರ್ಣಾಭರಣ (ಮೈಸೂ.ಜಿ)

ಓಲೆಗರಿ

ತಾಳೆಮರದ ಗರಿ

‍ಓಲೆಗರಿಟೋಪಿ

‍ಬಿಸಿಲಿನಿಂದ ಹಾಗೂ ಮಳೆಯಿಂದ ರಕ್ಷಣೆ ಪಡೆ‍ಯಲು ಬಳಸುವ ತಾಳೆಗರಿಯಿಂದ ಮಾಡಿದ ಟೋಪಿ

ಓಲೆಗರಿಮರ

ಶ್ರೀತಾಳೆ ಮರ
Follow Us :   
  Download Bharatavani App
  Bharatavani Windows App