भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓರಣ

ಒಪ್ಪ; ವ್ಯವಸ್ಥಿತ; ಅಚ್ಚುಕಟ್ಟು

ಓರಿ

ಅಡಿಗೆ ಮಾಡುವ ಕೋಣೆ (ಉಕ)

ಓರಿ

ಪಡಿಮಾಡಿನ ಭಾಗ (ಉಕ.ಜಿ)

ಓರುಗೋಲು

ಹಿಡ ಹೊಡೆಯುವ ಕೋಲು (ಬೆಂಗ್ರಾ.ಜಿ/ ಮಂಡ್ಯ.ಜಿ).
ಓರಗೊರಡು

ಓರೆಗತ್ತಿ

ಒಂದು ಬಗೆಯ ಆಯುಧ (ಮಂಡ್ಯ.ಜಿ)

ಒರೆತುರುಬು

ಗೊಂಡರ ಹೆಂಗಸರು ಜಡೆಹಾಕದೆ ಬಲಬದಿಗೆ ಓರೆಯಾಗಿ ಕಟ್ಟುವ ತುರುಬು (ಉಕ.ಜಿ)

ಓರೆಬೈತಲೆ

ಯಕ್ಷಗಾನದ ಸ್ತ್ರೀವೇಷವು ತಲೆಯ ಸ್ವಲ್ಪ ಬದಿಗೆ ತೆಗೆಯುವ ಬೈತಲೆ (ದಕ.ಜಿ)

ಓರೆಮುಡಿ

ಯಕ್ಷಗಾನದ ಸ್ತ್ರೀಪಾತ್ರವು ಬೈತಲೆಯ ಆಕಡೆ ಈಕಡೆ ಕಟ್ಟುವ ತುರುಬಿನ ವಿನ್ಯಾಸ (ದಕ.ಜಿ)

ಓರ‍್ಗರ

ಹೋರಿಕರ; ಗಂಡುಕರ (ತುಮ.ಜಿ)

ಒರ್ಗುಡಿಸು

ಒಂದು ಬದಿಗೆ ವಾಲಿಸು (ದಕ.ಜಿ)

ಓರ‍್ಸು

ನಂಜಿಕೊ (ಉಕ.ಜಿ)

ಓಲ್ ಮಡ್ಲ್

ನೇಯ್ದ ತೆಂಗಿನ ಗರಿ (ದಕ.ಜಿ)

ಓಲಗ

ನಾದಸ್ವರ ಮೊದಲಾದ ಮಂಗಳವಾದ್ಯ.
ಕದ್ದು ಮದ್ದೆ ಆಗ್ತೀನಿ ಬಗ್ಗಿ ಊದು ಓಲಗವ ಅಂದ್ನಂತೆ.
ವಾಲಗ

ಓಲಗದ ಕುಣಿತ

ಸೋಲಿಗರ ಕುಣಿತದಲ್ಲಿನ ಒಂದು ವಿಧ. ಇದರಲ್ಲಿ ಕಂಸಾಳೆಗೆ ಬದಲಾಗಿ ಓಲಗವನ್ನು ಬಳಸುತ್ತಾರೆ. ವಿವಿಧ ಗತ್ತುಗಳಲ್ಲಿ ಹಬ್ಬದ ಇಡೀ ರಾತ್ರಿ ತಮ್ಮ ದೇವರ ಪ್ರೀತ್ಯರ್ಥವಾಗಿ ಕುಣಿಯುತ್ತಾರೆ. ಈ ಕುಣಿತಕ್ಕೆ ಜೋಡಿಯಾಗಿ ಹೆಂಗಸರ ಹಾಡುಗಳೂ ಸೇರುತ್ತವೆ.
‍ವಾಲ್ಗುದು ಕುಣಿತ

ಓ‍ಲಸರಿ

ಭೂತಕೋಲದ ಒಂದು ಆಚರಣೆ; ಭೂತ ನರ್ತಕ ತನ್ನ ಬಿರುದಾವಳಿಗಳೊಂದಿಗೆ ಮೆರವಣಿಗೆ ಹೋಗುವುದು

‍ಓಲಾಟ

ಗೆಳೆತನ; ಸ್ನೇಹ (ತುಮ.ಜಿ)

ಓಲಾಡು

ತೂಗಾಡು; ಅನಿಶ್ಚಿತವಾಗಿ ವರ್ತಿಸು

ಓಲಾಡು

ನಲಿದಾಡು

ಓಲಾಡು

ನಿಧಾನಕ್ಕೆ ಬಾಗಿ ನಡೆಯುವಿಕೆ (ಚಿತ್ರ.ಜಿ)

ಓಲಾಡು

ವೈಯಾರ ಮಾಡು, ತೊನೆದಾಡು, ನುಲಿದಾಡು (ಬೆಂಗ.ಜಿ).
ವಾಲಾಡು
Follow Us :   
  Download Bharatavani App
  Bharatavani Windows App