भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓನ್ನೆ

ಒಂದರಿ; ಜರಡಿ

ಓಪ

ಪ್ರಿಯಕರ; ಗಂಡ; ನಲ್ಲ (ಗುಲ್ಬ.ಜಿ)

ಓಬಳದೇವರು

ಅಹೋಬಲ ಎ೦ಬುದು ಓಬಳ ಎಂದಾಗಿದ್ದು ಇದು ನರಸಿಂಹ ಸ್ವಾಮಿಯ ಹೆಸರಿಗೆ ಪರ್ಯಾಯವಾಗಿ ಬಳಕೆಯಾಗುತ್ತದೆ. ಚಿತ್ರದುರ್ಗ, ತುಮಕೂರು ಮೊದಲಾದ ಪ್ರದೇಶಗಳಲ್ಲಿ ಓಬಳನಾಯಕ ಓಬಳ ರೆಡ್ಡಿ ಮೊದಲಾಗಿ ಹೆಸರಿಡುವ ಪದ್ಧತಿ ಇದೆ (ಬಳ್ಳಾ.ಜಿ)

ಓಬಳುಪತಿ

ರಥವನ್ನು ನಡೆಸುವವನು (ತುಮ.ಜಿ)

ಓಬಿಟು

ಅನಾಥ (ಹಾಸ.ಜಿ)

ಓಬಿರಾಯನ ಕಾಲ

ಬಹಳ ಹಿಂದಿನ ಕಾಲ; ಪ್ರಾಚೀನ ಕಾಲ.
ಅದು ಯಾವ್ದೋ ಓಬಿರಾಯನ ಕಾಲ್ದಲ್ಲಿ ನಡೆದಿದ್ದು (ದಕ)

ಓಬುಡಿ

ಕಂಬಳದಲ್ಲಿ ಕೋಣ ಓಡಿಸುವಾಗ ಉತ್ತೇಜನ ನೀಡಲು ಉಪಯೋಗಿಸುವ ಶಬ್ದ (ದಕ.ಜಿ)

ಓಮ

ಅದೃಷ್ಟ (ಬಾಗ.ಜಿ)

ಓಮ

ಹೋಮ (ಮೈಸೂ.ಜಿ)

ಓಮ

ಓಂ ಕಾಳು

ಓಮಂಚಜ್ಜಯಿ

ದೈವಾರಾಧನೆಯ ಒಂದು ವಿಧ (ದಕ.ಜಿ)

ಓಮದೀಪನಿ

ಭೂತನರ್ತಕ ಕುಣಿಯುವ ಚಪ್ಪರದಲ್ಲಿ ಸೌದೆ ಇಟ್ಟು ಬೆಂಕಿ ಹಚ್ಚಿ ಪರಿಸರ ಶುದ್ಧ ಮಾಡುವ ಕ್ರಿಯೆ (ದಕ.ಜಿ)

ಓಮಸಾಲೆ

ಪಾಡ್ದನ ಉಲ್ಲೇಖಿತ ಊರು; ದೇಯಿ ಬೈದ್ಯೆದಿ ವಾಸಿಸುತ್ತಿದ್ದ ಊರು (ದಕ.ಜಿ)

ಓಮು/ಓಮ

ಕ್ಯಾರಮ್ ಬಲ್ಬೋಕಾಸ್ಟ್ಯಾನಮ್ ಕಾಪ್ಫಿಕಮ್; ಜೀರ್ಣಕಾರಕ ಗುಣವಿರುವ ಕಾಳು; ಅಜವಾನ ಗಿಡ. ನೋಡಿ – ಓದಕ್ಕಿ

ಓಯಿ

ಹೋತ್ತಿಗೆ; ಗ್ರಂಥ

ಓರಗಲ್ಲು

ಬಾಗಿದ ಕಲ್ಲು (ಧಾರ.ಜಿ)

ಓರಗಿತ್ತಿ

ಗಂಡನ ಸಹೋದರನ ಹೆಂಡತಿ (ಮೈಸೂ.ಜಿ./ ಚಾಮ.ಜಿ).
ನೆಗೆಣ್ಣೆ (ಧಾರ.ಜಿ/ಬೆಳ.ಜಿ/ಬಿಜಾ.ಜಿ) ವಾರಗಿತ್ತಿ

ಓರಗೆ

ಸಮವಯಸ್ಕ; ಸಮಜೋಡಿ.
ಓರಗೆಯ ಪುರುಷನೆಂದರೆ ಹಣಚಿಬಟ್ಟಿನ ಮೇಲೆ ಹರಿದಾಡುವ ಕುಂಕುಮದಂತೆ

ಓರಡಿ

ವಾರಡೆ; ಒಂದು ಬದಿಗೆ ವಾಲಿದ

ಓರಡಿ

ಇಳಿಜಾರು (ಬೆಂಗ್ರಾ.ಜಿ/‍ಕೋಲಾ.ಜಿ)
Follow Us :   
  Download Bharatavani App
  Bharatavani Windows App