भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಓತಿ

ದನಗಳ ಬಾಲಕ್ಕೆ ಮಾತ್ರ ತಗಲುವ ಒಂದು ರೋಗ, ಇದರ ಬಾಲದ ಕೂದಲು ಉದುರುವುದು ಇದರ ಲಕ್ಷಣ. ಈ ಭಾಗ ಕೆರೆದು ಗಾಯಕ್ಕೆ ಔಷಧ ಹಚ್ಚಿ ಬಟ್ಟೆ ಕಟ್ಟುವುದು ಚಿಕಿತ್ಸೆ (ಬೆಂಗ.ಜಿ)

ಓತಿ

ನೋಡಿ- ಓತಿಕೇತ

ಓತಿಕೇತ

ಹಲ್ಲಿಯಾಕಾರದ ಮತ್ತು ಗಾತ್ರದಲ್ಲಿ ಅದಕ್ಕಿಂತ ದೊಡ್ಡದಾದ ಬೇಲಿ ಮೇಲೆ ಓಡಾಡುವ ಒಂದು ಪ್ರಾಣಿ
ದೊಣ್ಣೆಕ್ಯಾತ,ಹೊನ್ನೆಕ್ಯಾತ, ಒಣ್ಣೆಕ್ಯಾತ, ದೊಣ್ಣೆಕಾಟ, ಒಣ್ಣಕಟ್ಟ (ಚಿತ್ರ.ಜಿ) ಹೆಂಟೆಗೊದ್ದ, ಅಂಟೆಗೊದ್ದ (ಮಂಡ್ಯ.ಜಿ)

ಓತಿಬಾಲ

ದನಗಳ ಬಾಲಕ್ಕೆ ಬರುವ ಒಂದು ರೋಗ. ಬಾಲದ ಕೂದಲು ಉದುರಿ ಓತಿಯ ಬಾಲದ ಹಾಗೆ ಕಾಣುವುದು

ಓತು

ಜೋಡಿಸು; ಒಟ್ಟು; ಅಡುಕು; ಸಾಲಾಗಿ ಜೋಡಿಸಿ ರಾಶಿಮಾಡಿ ಒಂದರಮೇಲೊಂದದು ಜೋಡಿಸಿದ್ದು

ಓತ್ನ

ಹೋತ; ವಯಸ್ಕ ಗಂಡು ಮೇಕೆ (ಕೋಲಾ.ಜಿ)

ಓದಕ್ಕಿ

ಒಂದು ತೊಲ ಓದಕ್ಕಿ ತರಿಸಿ. ನೋಡಿ- ಓಮು

ಓದಾವು

ಸಾಗಿಸು (ಬೆಂಗ್ರಾ.ಜಿ)

ಓದಿಸು

ಓದುಬರಹ ಕಲಿಸು; ಅಕ್ಷರಾಭ್ಯಾಸ ಮಾಡಿಸು

ಓದಿಸು

ಮಂಗಳಕಾರ್ಯದಲ್ಲಿ ಉಡುಗೊರೆ ಕೊಡುವುದು.
ಮದ್ವೇಲಿ ವಧುವಿಗೆ ಬೆಳ್ಳಿ ಲೋಟ ಓದಿಸಿದರು

ಓದಿಸು

ದೇವರಿಗೆ ನೈವೇದ್ಯ ಅರ್ಪಿಸು.
ಪ್ರತಿ ಶುಕ್ರವಾರ ಮಸೀದಿಗೆ ಹೋಗಿ ಸಕ್ಕರೆ ಓದಿಸಿ ಬರುವುದು ನನ್ನ ಕೆಲಸವಾಗಿತ್ತು

ಓದುಮಟ

ಓದುವಮಠ; ಕೂಲಿಮಠ (ಮಂಡ್ಯ.ಜಿ).
ಓದುಹಟ್ಟಿ (ಬೆಂಗ್ರಾ.ಜಿ)

ಓದೋಹುಳ

ಬಾವಿ ಕೆರೆಗಳ ನೀರಿನ ಮೇಲೆ ಅಕ್ಷರ ಬರೆಯುವಂತೆ ಚಲಿಸುವ ಕರಿಯಹುಳು (ಬಳ್ಳಾ.ಜಿ)

ಓದ್ಕಿ

‍ತಾಳಮದ್ದಲೆ (ಉಕ)

ಓದ್ಸು

ನೋಡಿ- ಓದಿಸು

ಓನಕ್‍ಕಾಂಡಿ

ಒನಕೆಯಂತೆ ದುಂಡಾಗಿರುವ ಮೀನು (ಉಡು.ಜಿ)

ಓನರಿ

ನಡುಮನೆ

ಓನಾಮ

ಓಂ ಎಂಬ ಮಂತ್ರ: ಆರಂಭದ ಮೂಲಾಕ್ಷರ.
ಬಾಲಕನಿಗೆ ಐದು ವರ್ಷಗಳಾಗಲು ಓನಾಮ ಪಡೂಜೆ ಮಾಡಿಸಿ ಮಠಕ್ಕೆ ಹಾಕಿದರು

ಓನಾಮ

ಪ್ರಾಥಮಿಕ ಜ್ಞಾನ.
ಅವನಿಗೆ ಅದರ ಓನಾಮಾನೂ ಗೊತ್ತಿಲ್ಲ

ಓನ್ನಲಿಗಲಿ

ಒಂದು ಬಗೆಯ ಸೊಪ್ಪು
Follow Us :   
  Download Bharatavani App
  Bharatavani Windows App