भारतीय भाषाओं द्वारा ज्ञान

Knowledge through Indian Languages

Dictionary

Kannada Janapada Nighantu Vol-1 (KJU)

Karnataka Janapada University

ನಿಘಂಟಿನ ಪೀಠಿಕಾ ಪುಟಗಳನ್ನು ಓದಲು ದಯವಿಟ್ಟು ಇಲ್ಲಿ ಕ್ಲಿಕ್‌ ಮಾಡಿರಿ
शब्दकोश के परिचयात्मक पृष्ठों को देखने के लिए कृपया यहाँ क्लिक करें
Please click here to view the introductory pages of the dictionary

ಅಂಟಿನ ಉಂಡೆ

ಒಣಹಣ್ಣು, ಕೊಬ್ಬರಿ, ಗಸಗಸೆಗಳಿಗೆ ಅಂಟು ಬೆರೆಸಿ ತಯಾರಿಸಿದ ಸಿಹಿ ಉಂಡೆ (ಉಕ.ಜಿ)

ಅಂಟಿನಬಾರು

ನೊಗಕ್ಕೆ ತಳಕು ಹಾಕುವ ಹಗ್ಗ

ಅಂಟಿನ್‌ಕಯ್ಡಿ

ಅಂಟಿನ ಕರಡಿಗೆ

ಅಂಟಿನ್‌ಕಯ್ಡಿ

ಕುಂಕುಮ ಹಚ್ಚಿಕೊಳ್ಳಲು ಬಳಸುವ ಅಂಟು

ಅಂಟಿಬಿಲ್ಲಿ

ನೋಡಿ – ಅಂಚಿಬಿಲಿ

ಅಂಟಿಸು

ನಾಟಿ ಮಾಡು.
ರಾಗಿ ಸಸಿ ಅಂಟಿಸು

ಅಂಟು

ಕೆಲವು ಸಸ್ಯಗಳಿಂದ ಜಿನುಗುವ, ಜಿಗುಟಾದ ಹಾಲಿನಂತಹ ರಸ; ಗೋಂದು; ಮೆತ್ತಿಕೊಳ್ಳುವ ಸ್ವಭಾವವುಳ್ಳ ವಸ್ತು.
ಅದನ್ನು ಮುಟ್ಟಿದ್ರೆ ಕೈಯೆಲ್ಲಾ ಅಂಟಾಗುತ್ತೆ

ಅಂಟು

ತಾಕು
ಅವ್ರು ಯಾವಾಗ್ಲೂಒಬ್ರಿಗೊಬ್ರು ಅಂಟ್ಕೊಂಡೇ ಕೂತಿರ‍್ತಾರೆ

ಅಂಟು

ಮುಟ್ಟು; ಸಾವಿನ ಸಂಬಂಧವಾದ ಮೈಲಿಗೆ

ಅಂಟು

ಸಂಬಂಧ

ಅಂಟು

ಕಸಿ ಮಾಡಲು ಅಥವಾ ನೆಡಲು ಬಳಸುವ ಹಂಬು ಅಥವಾ ಗಿಡದ ತುಂಡು. ಅದನ್ನು ನೆಟ್ಟರೆ ಚಿಗುರಿ ಗಿಡವಾಗುತ್ತದೆ.
ಮಲ್ಲಿಗೇದೋ, ಗುಲಾಬಿದೋ ಒಂದೆರಡು ಅಂಟು ತಂದು ಹಾಕು.

ಅಂಟುಗಣ್ಣಿ/ಅಂಟ್ಗಣ್ಣಿ

ಗೀಜು ತುಂಬಿರುವ ಕಣ್ಣಿನವಳು

ಅಂಟುಗಣ್ಣು

ಕಣ್ಣಿಗೆ ಅಂಟುಜಾಡ್ಯ ಅದಾಗ ಕಣ್ಣು ಕಟ್ಟಿಕೊಳ್ಳುವಿಕೆ

ಅಂಟುಗುಗ್ಗುಲ

ಕಾಮಿಫೋರ ಮೈಟಿಲ್: ಧೂಪದ ಮರ. ಈ ಮರದ ತೊಗಟೆಯನ್ನು ಕಚ್ಚು ಮಾಡಿ, ಅದರಿಂದ ಜಿನುಗುವ ಸುವಾಸಿತ ರಾಳವನ್ನು ಒಣಗಿಸಿ ಧೂಪ ಹಾಕಲು ಬಳಸುತ್ತಾರೆ (ದಕ.ಜಿ)

ಅಂಟುಗೋಡೆ

ಒತ್ತುಗೋಡೆ.
ಅವರ ಮನೆ ಮತ್ತು ನಮ್ಮನೇದು ಅಂಟುಗೋಡೆ

ಅಂಟುಗ್ವಾಟೆ

ಯುದ್ಧದ ಸಂದರ್ಭದಲ್ಲಿ ರಣರಂಗದಿಂದ ಹಿಂದಿರುಗಿ ಬರುವ ಸೈನ್ಯ ತಂಗಲು, ಆಯುಧಗಳನ್ನೆಲ್ಲ ರಕ್ಷಿಸಲು, ಊಟ ಉಪಚಾರ ರಂಜನೆಗಳಿಗಾಗಿ ಮೀಸಲಾದ ಮುಖ್ಯಕೋಟೆಯ ಬಳಿ ಇರುವ ನೆಲೆ.
ಬಿಡದಿ

ಅಂಟುಜಲಬೇಟೆ

ಹಕ್ಕಿ ಬೇಟೆಯ ಒಂದು ವಿಧಾನ

ಅಂಟುನಾಲಿಗಿ

ನಾಲಿಗೆ ದಪ್ಪ ಆಗಿ ಅದರ ಮೇಲೆ ಮುಳ್ಳು ಎದ್ದಂತೆ ಭಾಸವಾಗುವ ಕಾಯಿಲೆ (ಶಿವ.ಜಿ)

ಅಂಟುಪುರಲೆ

ನೋಡಿ – ಅಂಟುಪುರಳೆ

ಅಂಟುಪುರಳೆ/ ಅಂಟುಪುರಲೆ/ ಅಂಟುಪುರ‍್ಲೆ

ಪ್ಯೂಪಲಿಯ ಅಟ್ರೋ ಪರ್ಪ್ಯೂರಿಯ: ದನದ ಬಾಲಕ್ಕೆ ಅಥವ ಬಟ್ಟೆಗೆ ಅಂಟಿಕೊಳ್ಳುವ ಸಣ್ಣ ಮುಳ್ಳುತೆನೆ ಹೊಂದಿರುವ ಒಂದು ಬಗೆಯ ಸಸ್ಯ
Follow Us :   
  Download Bharatavani App
  Bharatavani Windows App